ISSN (Print) - 0012-9976 | ISSN (Online) - 2349-8846

ಅಯೋಧ್ಯಾ- ಜಾಗವೋ? ಅವಕಾಶದ ಹರಹೋ?

.

The translations of EPW Editorials have been made possible by a generous grant from the H T Parekh Foundation, Mumbai. The translations of English-language Editorials into other languages spoken in India is an attempt to engage with a wider, more diverse audience. In case of any discrepancy in the translation, the English-language original will prevail.

 

ವಾಸ್ತವವಾಗಿ ನೋಡುವುದಾದರೆ ಇತ್ತೀಚೆಗೆ ಸುಪ್ರೀಂ ಕೋರ್ಟು ನೀಡಿರುವ ಅಯೋಧ್ಯಾ ತೀರ್ಪು ವಿವಿಧ ವಾದಿ-ಪ್ರತಿವಾದಿಗಳು ವ್ಯಾಜ್ಯ ಹೂಡಿದ್ದ ಒಂದು ನಿಖರ, ಭೌತಿಕ ಪ್ರದೇಶದ ಬಗ್ಗೆಯೇ ಆಗಿದೆ. ಬಹಳಷ್ಟು ಜನರಿಗೆ ಈ ತೀರ್ಪು ವಿವಾದಿತ ಸ್ಥಳವಾಗಿ ಪರಿವರ್ತಿತ ಜಾಗದ ಸಮಸ್ಯೆಗೆ ಒಂದು ಅಂತ್ಯ ಸಿಕ್ಕಂತಾಯಿತು ಎನಿಸಿದೆ. ನ್ಯಾಯಾಲಯವು ವಿವಾದಿತ ಜಾಗವನ್ನು ಒಂದು ನಿರ್ದಿಷ್ಟ ಧಾರ್ಮಿಕ ಶ್ರದ್ಧೆಯುಳ್ಳವರ ವಶಕ್ಕೆ ನೀಡುವ ಮೂಲಕ ಆ ಜಾಗದ ಸ್ವರೂಪಕ್ಕೆ ಒಂದು ನಿರ್ವಚನವನ್ನು ಕೊಟ್ಟಿದೆ. ಮತ್ತೊಂದು ಧಾರ್ಮಿಕ ಶ್ರದ್ಧೆಯುಳ್ಳ ವಾದಿಗಳಿಗೂ ಕೋರ್ಟು ಮತ್ತೊಂದು ಕಡೆ ಐದು ಎಕರೆ ಜಮೀನನ್ನು ನೀಡಬೇಕೆಂದು ಆದೇಶಿಸಿದೆ. ಮೂಲಭೂತವಾಗಿ ಈ ತೀರ್ಪು ಒಂದು ಭೌತಿಕ ಸ್ಥಳವು ಯಾರ ವಶದಲ್ಲಿರಬೇಕು ಎಂಬುದರ ಬಗ್ಗೆ ನೀಡಿದ ಆದೇಶವೇ ಆಗಿದೆ. ಈ ಆದೇಶದ ಮೂಲಕ ವಿವಾದಿತ ಜಾಗಗಳನ್ನು ವಾದಿ-ಪ್ರತಿವಾದಿಗಳಿಂದ ರಕ್ಷಿಸಲು ಅವನ್ನು ಕೋರ್ಟುಗಳು ತಮ್ಮ ನ್ಯಾಯಿಕ ನಿಯಂತ್ರಣಕ್ಕೆ ತೆಗೆದುಕೊಳ್ಳಬಹುದೆಂದು ಈ ತೀರ್ಪು ಹೇಳಿದಂತಾಗಿದೆ. ಒಂದು ಸ್ಥಳದ ಒಡೆತನದ ಬಗ್ಗೆ ಒಂದು ನಿರ್ದಿಷ್ಟ ವ್ಯಾಖ್ಯಾನವನ್ನು ಆರೋಪಿಸುತ್ತಾ ಕೋರ್ಟುಗಳು ವ್ಯಾಜ್ಯತೀರ್ಮಾನವನ್ನು ಮಾಡುತ್ತವೆ. ಒಂದು ಸ್ಥಳವೇ ತನ್ನ ವಿವಾದದ ಬಗೆಗಿನ ತೀರ್ಮಾನಕ್ಕೆ ಬೇಕಾದ ಸಾಕ್ಷಿಗಳನ್ನು ಸಹ ಒದಗಿಸಿಬಿಡುತ್ತದೆ. ಆದರೆ ಕೊಡಲಾಗುವ ನ್ಯಾಯಾದೇಶವು ಕೆಲವರಿಗೆ ಸಂಪೂರ್ಣವಾಗಿ ತೃಪ್ತಿಯನ್ನೇನೂ ತರಲಾರದು. ಮಾತ್ರವಲ್ಲ. ಮತ್ತಷ್ಟು ಕಾನೂನಾತ್ಮಕ ದಾರಿಯನ್ನು ಪರಿಶೀಲಿಸಲು ನ್ಯಾಯಾಂಗವೇ ಅವಕಾಶವನ್ನು ಕಲ್ಪಿಸಿಕೊಡುತ್ತದೆ.

ಒಂದು ಸ್ಥಳವು ಅದರ ಬಗೆಗಿನ ಕಲ್ಪನಾವಕಾಶಗಳಲ್ಲಿ ಹೆಚ್ಚಿನ ವಿಸ್ತರಣೆಯನ್ನು ಪಡೆದುಕೊಳ್ಳುತ್ತಾ ಹೋಗುತ್ತದೆಯೇ ವಿನಾ ಅದರ ಭೌತಿಕ ಪರಿಮಾಣಗಳ ವಿಸ್ತರಣೆಯಲ್ಲಲ್ಲ. ಹೀಗೆ ಗೊತ್ತಿರದ ಅಥವಾ ಅಪರಿಚಿತವಾದ ಸ್ಥಳಗಳೂ ಸಹ ಸಾರ್ವಜನಿಕ ಕಲ್ಪನಾ ಕಲ್ಪನಾ ಪರಿಧಿಯ ತಿಳಿವಿನ ಹಾಗೂ ಸಾಂಸ್ಕೃತಿಕ ವ್ಯೋಮಾವಕಾಶದಲ್ಲಿ ಸ್ವೈರ ವಿಹಾರ ಮಾಡುತ್ತವೆ. ಯಾವಾಗ ಒಂದು ಸ್ಥಳವು ಕಲ್ಪನಾ ಲೋಕದಲ್ಲಿ ತನ್ನ ಪ್ರಯಾಣವನ್ನು ಪ್ರಾರಂಭಿಸುತ್ತದೋ ಆಗ ಅದು ತನ್ನಲ್ಲಿ ದ್ವೇಷ, ಸೇಡು ಮತ್ತು ಪ್ರತೀಕಾರಗಳಂಥ ಸ್ಪೋಟಕ ಭಾವನೆಗಳಿಗೆ ಬೌದ್ಧಿಕ ತಾವನ್ನು ಕಲ್ಪಿಸಿಕೊಡುತ್ತದೆ. ಹಾಗಾದಾಗ ಸ್ಥಳಗಳು ಸ್ಪೋಟಕ ಸಿಡಿಮದ್ದುಗಳಾಗಿ ಪರಿವರ್ತಿತವಾಗುತ್ತವೆ. ಒಂದು ನಿರ್ದಿಷ್ಟ ಸಾಂಸ್ಕೃತಿಕ ಪರಿಸರದ ಎಲ್ಲೆಯೊಳಗೆ ಸಾರ್ವಜನಿಕ ಸ್ಥಳಗಳಲ್ಲಿ ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಳ್ಳುವ ಸಾಮಾನ್ಯ ರೀತಿಗಳಿಗೆ ವ್ಯತಿರಿಕ್ತವಾಗಿ ವ್ಯಕ್ತಿಗಳ ಮೇಲೆ ನಿರಂತರವಾಗಿ ಭಾರೀ ಭಾಷಾ ಪ್ರಯೋಗಗಳ ದಾಳಿ ನಡೆಯುತ್ತಾ ಹೋಗುತ್ತದೆ. ಈ ಸಾರ್ವಜನಿಕ ಅಭಿವ್ಯಕ್ತಿಗಳ ಅರಚಾಟದ ತೀವ್ರತೆಗಳು ಕಡಿಮೆ ದಮನಕಾರಿ ಪದಪ್ರಯೋಗಗಳ ಬಳಕೆಯನ್ನು ಬಯಸುವ ವ್ಯಕ್ತಿಗನ್ನು ಸಾಂಸ್ಕೃತಿಕವಾಗಿ ಸಂಕುಚಿತಗೊಳಿಸಿಬಿಡುತ್ತವೆ. ಸಾರ್ವಜನಿಕ ಅಭಿವ್ಯಕ್ತಿಯಲ್ಲಿ ಅರಚಾಟವು ಇತರರ ಅಭಿವ್ಯಕ್ತಿಯನ್ನು ಹತ್ತಿಕ್ಕುತ್ತದೆ. ಹೀಗಾಗಿ ದೊಡ್ಡಧ್ವನಿಯಲ್ಲಿ ಹಾಗು ಎಲ್ಲವನ್ನು ಆವರಿಸಿಕೊಳ್ಳುವ ರೀತಿಯ ಅಭಿವ್ಯಕ್ತಿಯ ಅಂತಿಮ ಪರಿಣಾಮ ಇತರರ ಬಾಯಿ ಮುಚ್ಚಿಸುವುವುದೇ ಆಗಿರುತ್ತದೆ. ಒಂದು ಸ್ಥಳದ ನಿಯಂತ್ರಣ ಮತ್ತು ಅಧಿಕಾರಗಳೇ ಕೆಲವರ ಮೇಲೆ ಹೇರಲ್ಪಡುವ ಭಾವನೆಗಳ ಸ್ಪೋಟಕ್ಕೆ ದಾರಿ ಮಾಡಿಕೊಡುತ್ತದೆ. ಇಂತಾ ಸಂದರ್ಭದಲ್ಲಿ ಕೇಳಬೇಕಿರುವ ಪ್ರಮುಖ ಪ್ರಶ್ನೆಯೇನೆಂದರೆ: ನಮ್ಮ ನ್ಯಾಯವ್ಯವಸ್ಥೆಯು ಅತ್ಯಂತ್ಯ ಜರೂರಾಗಿ ಬೇಕಿರುವವರಿಗೆ ಆ ಸ್ಥಳ-ಅವಕಾಶವನ್ನು ಮರಳಿಸುವುದೇ?

ಇಂದು ಸಾಮಾಜಿಕ-ಸಾಂಸ್ಕೃತಿಕ ಪರಿಧಿಗಳಲ್ಲದೆ ಬೌದ್ಧಿಕ ಪರಿಧಿಗಳು ಸಹ ವೇಗವಾಗಿ ಕಿರಿದಾಗುತ್ತಿವೆ. ಸ್ಥಳಾವಕಾಶಗಳ ಪರಿಧಿಗಳು ಹೀಗೆ ಕಿರಿದಾಗುತ್ತಿದ್ದಂತೆ ಬೇರೆಬೇರೆ ಪ್ರದೇಶಗಳಲ್ಲಿರುವ ಒಂದೇ ಅಸ್ಮಿತೆಯುಳ್ಳ ಜನಸಮುದಾಯಗಳೆಲ್ಲಾ ಒಂದೇ ಜಾಗದಲ್ಲೇ ಒಟ್ಟಾಗುವ ಗೆಟ್ಟೋಗಳು ಏರ್ಪಡುತ್ತವೆ ಮತ್ತದನ್ನೇ ಜನಾಂಗೀಯ ವಸತಿಗಳೆಂದು ಬಣ್ಣದ ಭಾಷೆಯಲ್ಲಿ ಕರೆಯಲಾಗುತ್ತದೆ. ಜನರನ್ನು ಒಂದು ಕಿರಿದಾದ ಅಸ್ಮಿತೆಗೆ ಕಟ್ಟಿಹಾಕುವ ತರ್ಕವು ಅಥವಾ ಅದರೊಳಗೆ ತಮ್ಮನ್ನು ತಾವೇ ಬಂಧಿಗಳಾಗಿ ಇರುವಂತೆ ಮಾಡುವ ಸಂದರ್ಭವು ಇತರರನ್ನು ತಮ್ಮ ಅಧೀನಕ್ಕೊಳಪಡಿಸಿಕೊಂಡು ತಮ್ಮ ಶ್ರೇಷ್ಠತೆಯನ್ನು ಮೆರೆಯಬಯಸುವವರಿಗೆ ಒಂದು ನಿರಾಶ್ರಿತ ಶಿಬಿರದಂತೆ ಕಾಣತೊಡಗುತ್ತದೆ. ಅಂಥಾ ಸ್ಥಳಗಳು ಒಂದು ಬಗೆಯ ಹಿಮಗಟ್ಟಿರುವ , ಸಾಂಸ್ಕೃತಿಕ ಆಕ್ರಮಣಕ್ಕೊಳಗಾದ ಸ್ಥಳದಂತೆ ಕಾಣತೊಡಗುತ್ತದೆ. ಅಂಥಾ ಸಂದರ್ಭಗಳಲ್ಲಿ ಅನುಮಾನಕ್ಕೀಡಾಗಿರುವ ಅಥವಾ ಸಂಪೂರ್ಣ ಸಾಮಾಜಿಕ ಅಧೀನತೆಗೆ ಒಳಪಟ್ಟಿರುವ ಸ್ಥಳಗಳ ಪರವಾಗಿ ಅಭಿಪ್ರಾಯ ರೂಪಿಸಬಯಸುವ ರಾಜಕೀಯ ಪ್ರಕ್ರಿಯೆಗಳಿಗೆ ಹೆಚ್ಚಿನ ಪ್ರತಿಕ್ರಿಯೆ ದೊರೆಯುವುದಿಲ್ಲ.

ಈಗ ಕೇಳಬೇಕಿರುವ ಪ್ರಶ್ನೆಯೇನೆಂದರೆ: ಎಂತಹ ಪರಿಸ್ಥಿತಿಗಳಲ್ಲಿ ಈ ಬಗೆಯ  ಸ್ಥಳಗಳು ಹೀಗೆ ನಿಂತನೀರಾಗಿ, ನಿಶ್ಚಲವಾಗದಂತೆ ಕಾಪಾಡಲು ಸಾಧ್ಯವಾಗುವುದು? ಅಥವಾ ಸಮಾನವಾದ ಗೌರವ ಮತ್ತು ಘನತೆಗಳಿಗೆ ಅರ್ಹವಾಗಿರುವ ವ್ಯಕ್ತಿಗಳಿಂದಲೂ ಹೆಚ್ಚಿನ ಪ್ರತಿಕ್ರಿಯೆ ಮತ್ತು ಗಮನವನ್ನು ಸೆಳೆಯಬಲ್ಲ ರೀತಿಯಲ್ಲಿ ಒಂದು ಸ್ಥಳವನ್ನು ಚಲನಶೀಲಗೊಳಿಸುವ ಸಂದರ್ಭಗಳು ಯಾವುವು? ಆ ಸಂದರ್ಭವು ಸಹಜವಾಗಿ ಒಂದು ಸ್ಥಳೀಯ ವಸ್ತುವು ವಿಶ್ವಾತ್ಮಕ ವಸ್ತುವಾಗುವ ಅದರ ಹೊರ ಪ್ರಯಾಣವನ್ನು ಸಹ ಸೂಚಿಸುತ್ತದೆ. ಆದ್ದರಿಂದ ಒಂದು ಸ್ಥಳವು ಬದಲಾವಣೆಯ ಅಥವಾ ವಿಮೋಚನಾ ಗತಿತರ್ಕದ ಮೂಸೆಯಲ್ಲಿ ಪುನರ್ ನಿರೂಪಿತಗೊಳ್ಳಬೇಕಾಗುತ್ತದೆ. ಉದಾಹರಣೆಗೆ ಈ ನಿರ್ದಿಷ್ಟ ಪ್ರಕರಣದಲ್ಲಿ ಸುನ್ನಿ ವಕ್ಫ್ ಬೋರ್ಡಿಗೆ ನೀಡಲಾಗಿರುವ ಐದು ಎಕರೆ ಜಾಗವನ್ನು ಹೊಸ ಪರಿವರ್ತನಾವಾದಿ ಜ್ನಾನವನ್ನು ಹಂಚುವ ಗತಿಶೀಲವಾದ ಸ್ಥಳವನ್ನಾಗಿ ಮಾರ್ಪಡಿಸಿಕೊಳ್ಳಬಹುದು. ಅಂಥಾ ಸ್ಥಳವು ತನಗೆ ವಿರುದ್ಧವಾದ ಅನ್ಯರನ್ನು ಸೃಷ್ಟಿಸದೆ ಪರಸ್ಪರ ಗೌರವ ಮತ್ತು ಮಾನವೀಯ ಕಾಳಜಿಗಳೊಂದಿಗೆ  ಮತ್ತೊಬ್ಬನೆಡೆ ಕೈಚಾಚುವ ಒಂದು ವಿಶ್ವಾತ್ಮಕ ಮನುಷ್ಯರನ್ನು ಸೃಷ್ಟಿಸಬಹುದು. ಒಂದು ವಿಶ್ವಾತ್ಮಕ ವ್ಯಕ್ತಿಯನ್ನು ಸೃಷ್ಟಿಸಲು ತಮ್ಮ ತಮ್ಮ  ಬೌದ್ಧಿಕ-ಪರಿಗ್ರಹಣಾ ಹರಹನ್ನು ವಿಸ್ತರಿಸಿಕೊಳ್ಳಬೇಕಿರುತ್ತದೆ. ಅದನ್ನು ಮತ್ತೊಬ್ಬರನ್ನು ಅಧೀನವಾಗಿರಿಸಿಕೊಳ್ಳಬೇಕೆಂಬ ಆಕಾಂಕ್ಷೆಗಳನ್ನುಳ್ಳ ಸನಾತನವಾದಿ ಅಧಿಕಾರಶಾಹಿ ಸ್ಥಳವಾಗದಂತೆ ವಿಮೋಚನೆ ಮಾಡುವ ಮೂಲಕ ಅದನ್ನು ಸಾಧಿಸಬಹುದಾಗಿದೆ.

 

Back to Top